ಮೈಸೂರು, ಆ 10 (DaijiworldNews/DB): ನನ್ನ ಪುತ್ರ ಪೂರ್ವಜ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ನಿಜ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ಪುತ್ರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಗನಿಗೆ 45 ವರ್ಷ ವಯಸ್ಸಾಗಿದೆ. ಅವನ ದಾರಿಯನ್ನು ಅವನು ಹುಡುಕಿಕೊಳ್ಳುವಾಗ ನಾನು ಬೇಡ ಎನ್ನಲು ಆಗುತ್ತದೆಯೇ? ನನ್ನ ಮಾತು ಕೇಳು ಎಂದು ಈಗಲೂ ಹೇಳಲಾಗುತ್ತದೆಯೇ? ಮಕ್ಕಳಿಗೆ ಸ್ವಾತಂತ್ರ್ಯ ನೀಡದಿರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ನವರು ಸಿಎಂ ಆಗೇ ಬಿಟ್ಟೆ ಎಂಬ ಅವಸರದಲ್ಲಿದ್ದಾರೆ. ಅದರಲ್ಲೂ ದಾವಣಗೆರೆ ಸಮಾವೇಶದ ಬಳಿಕ ಜನರ ಮತದ ಡಬ್ಬ ಸಿಕ್ಕೇ ಬಿಟ್ಟಿತೆಂಬ ಭ್ರಮೆಯಲ್ಲಿದ್ದಾರೆ. ದುಶ್ಯಾಸನ, ದುರ್ಯೋಧನನ ದುರಹಂಕಾರ ಹೆಚ್ಚು ದಿನ ಬಾಳುವುದಿಲ್ಲ ಎಂದರು.