ನೋಯ್ಡಾ, ಆ 10 (DaijiworldNews/MS): ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಹೈಡ್ರಾಮಾ ಸೃಷ್ಟಿಯಾದ ಬಳಿಕ ಬಂಧನಕ್ಕೆ ಒಳಗಾಗಿರುವ ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ತ್ಯಾಗಿ, ಘಟನೆ ಕುರಿತು ಕ್ಷಮೆಯಾಚಿಸಿದ್ದು, ತೊಂದರೆಗೆ ಒಳಗಾದ ಮಹಿಳೆ ತನ್ನ ಸಹೋದರಿ ಇದ್ದಂತೆ ಎಂದಿದ್ದಾನೆ.
ಆಗಸ್ಟ್ 5ರಂದು ಉತ್ತರ ಪ್ರದೇಶದ ನೋಯ್ಡಾ ಗ್ರಾಂಡ್ ಒಮೆಕ್ಸ್ ಹೌಸಿಂಗ್ ಸೊಸೈಟಿಯ ಸೆಕ್ಷರ್ 93ಬಿರಲ್ಲಿ ಸ್ಥಳೀಯ ಮಹಿಳೆಯಿಂದಿಗೆ ಅನುಚಿತವಾಗಿ ವರ್ತಿಸಿದ್ದರು. ಸೊಸೈಟಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಕ್ಕೆ ತಕರಾರು ವ್ಯಕ್ತವಾದಾಗ ಶ್ರೀಕಾಂತ್ ತ್ಯಾಗಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಅಸಭ್ಯ ಭಾಷೆ ಬಳಸಿದ್ದರು.
ಈ ಕುರಿತ ವಿಡಿಯೋ ಭಾರಿ ವೈರಲ್ ಆದಾಗ ಉತ್ತರ ಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ನೋಯ್ಡಾದ ಸೆಕ್ಟರ್ -93 ಬಿ ಯಲ್ಲಿನ ಗ್ರ್ಯಾಂಡ್ ಓಮ್ಯಾಕ್ಸ್ ಹೌಸಿಂಗ್ ಸೊಸೈಟಿಯಲ್ಲಿ ಅವರ ಮನೆಯ ಹೊರಗಿನ ಅಕ್ರಮ ನಿರ್ಮಾಣವನ್ನು ಬುಲ್ಡೋಜರ್ಗಳು ಕಿತ್ತುಹಾಕಿದ ಒಂದು ದಿನದ ನಂತರ ಅವರ ಬಂಧನವಾಗಿತ್ತು.