ಅಹ್ಮದಾಬಾದ್, ಆ 10 (DaijiworldNews/MS): ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ವಿವಿಧ ಇಲಾಖೆಯ ಅಧಿಕಾರಿಗಳಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದ ಆರೋಪಕ್ಕೆ ಸಂಬಂಧಿಸಿ 9 ಮಂದಿಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಲಾಗಿದೆ.
ಗುಜರಾತ್ ಮಾಹಿತಿ ಆಯೋಗವು ಈ ರೀತಿಯ ಆದೇಶ ನೀಡಿದ್ದು, ಪುನರಾವರ್ತಿತ ಆರ್ಟಿಐ ಪ್ರಶ್ನೆಗಳನ್ನುಕೇಳುವ ಮೂಲಕ ಅಧಿಕಾರಿಗಳಿಗೆ "ಕಿರುಕುಳ ನೀಡುವ" ಒಂಬತ್ತು ವ್ಯಕ್ತಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಅವರ ಅರ್ಜಿಗಳಿಗೆ ಇನ್ನು ಮುಂದೆ ಪ್ರತಿಕ್ರಿಯಿಸಬಾರದು ಎಂದು ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ ಮಾಹಿತಿ ಆಯುಕ್ತರ ಆದೇಶಗಳನ್ನು ವಿಶ್ಲೇಷಿಸಿದ ಎನ್ಜಿಒ, ಇದೇ ಮೊದಲ ಬಾರಿಗೆ ಗುಜರಾತ್ನಲ್ಲಿ "ಮಾಹಿತಿ ಹುಡುಕುವುದನ್ನು ಜೀವಮಾನದವರೆಗೆ ನಿಷೇಧಿಸಿದ" ಮೊದಲ ಆದೇಶ ಇದಾಗಿದೆ ಎಂದು ಹೇಳಿಕೊಂಡಿದೆ.