ಚಿಕ್ಕಮಗಳೂರು, ಆ 10 (DaijiworldNews/MS):ಇಲ್ಲಿನ ಮೂಡಿಗೆರೆ ಬಳಿಯ ಕೆ.ತಲಗೂರು ಗ್ರಾಮದಲ್ಲಿ ಮನೆಯ ಮೇಲೆ ಮರ ಬಿದ್ದು ತಾಯಿ ಮತ್ತು ಮಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು ಮೃತರನ್ನು 55 ವರ್ಷದ ಚಂದ್ರಮ್ಮ ಹಾಗೂ ಮಗಳು 37 ವರ್ಷದ ಸರಿತಾ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ಚಂದ್ರಮ್ಮ ಅವರ ಮನೆಯಲ್ಲಿ ಮಕ್ಕಳಾದ ಸರಿತಾ , ಸುನಿಲ್ ಹಾಗೂ ದೀಕ್ಷಿತ್ ಎಂಬವರು ಮಲಗಿದ್ದ ವೇಳೆ ಮನೆಯ ಪಕ್ಕದಲ್ಲಿ ಇದ್ದ ಬೃಹದಾಕಾರದ ಮರ ಚಂದ್ರಮ್ಮ ಅವರ ಮನೆಯ ಮೇಲೆ ಬಿದ್ದು ಮನೆಯೊಳಗೆ ಮಲಗಿದ್ದ ಸರಿತಾ ಸ್ಥಳದಲ್ಲಿ ಮೃತಪಟ್ಟಿದ್ದು, ಚಂದ್ರಮ್ಮರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ
ಭಾರಿ ಮಳೆ ಕಾರಣಕ್ಕೆ ಮೂಡಿಗೆರೆ ತಾಲ್ಲೂಕಿನ ಎಲ್ಲಾ ಶಾಲೆ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿದೆ, ರಜೆ ಘೋಷಿಸಿ ತಹಶಿಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.