ಚಾಮರಾಜನಗರ, ಆ 09 (DaijiworldNews/HR): ಹುಟ್ಟುಹಬ್ಬದಂದೇ ಕಾಲೇಜು ಉಪನ್ಯಾಸಕಿಯೋರ್ವರು ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ.
ನಗರದ ಜೆಎಸ್ಎಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಚಂದನಾ (26) ಮೃತರು.
ಚಂದನಾ ಅವಿವಾಹಿತೆಯಾಗಿದ್ದ, ನಗರದ ಜೆಎಸ್ಎಸ್ ಕಾಲೇಜಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕಿಯಾಗಿದ್ದರು.
ಇನ್ನು ಇಂದು ಬೆಳಿಗ್ಗೆ 11.30 ಆದರೂ ಚಂದನಾ ಅವರು ಹಾಸ್ಟೆಲ್ ರೂಮಿನಿಂದ ಹೊರಬಾರದ ಕಾರಣ ವೆಂಟಿಲೇಟರ್ ಮೂಲಕ ನೋಡಿದಾಗ ನೇಣು ಹಾಕಿಕೊಂಡಿರುವುದು ಕಂಡು ಬಂದಿದೆ.
ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.