ಹೈದರಬಾದ್ , ಆ 09 (DaijiworldNews/MS): ಬಹುಭಾಷಾ ನಟಿ ಹಾಗೂ ಮಾಜಿ ಶಾಸಕಿ ಜಯಸುಧಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಮಾಜಿ ಕಾಂಗ್ರೆಸ್ ಶಾಸಕಿಯಾಗಿರುವ ಇವರು 2014ರ ಚುನಾವಣೆಯಲ್ಲಿ ಸೋತ ನಂತರ ರಾಜಕೀಯದಿಂದ ದೂರ ಉಳಿದಿದ್ದರು.
ಇದಕ್ಕೆ ಪುಷ್ಠಿ ನೀಡುವಂತೆ ಜಯಸುಧಾ ಇತ್ತೀಚೆಗೆ ತೆಲಂಗಾಣ ಬಿಜೆಪಿ ನಾಯಕ ಎಟೆಲಾ ರಾಜೇಂದರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಸಿಕಂದರಾಬಾದ್ʼನಿಂದ ಕಾಂಗ್ರೆಸ್ ಶಾಸಕಿಯಾಗಿ ಜಯಸುಧಾ ಗೆದ್ದಿದ್ದರು. 2014ರ ಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯದಿಂದ ದೂರವಿದ್ದ ನಟಿ ಈ ತಿಂಗಳ ಅಂತ್ಯದಲ್ಲಿ ಬಿಜೆಪಿ ಸೇರಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಮದ್ರಾಸ್ನಲ್ಲಿ ಹುಟ್ಟಿ ಬೆಳೆದ ಅವರ ಪತಿ ಇತ್ತೀಚೆಗೆ ನಿಧನರಾಗಿದ್ದು, ತೆಲಂಗಾಣ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಲು ಜಯಸುಧಾ ಸಿದ್ಧರಾಗಿದ್ದಾರೆ ಎಂದು ನಂಬಲಾಗಿದೆ. ವಿಜಯಶಾಂತಿ ಮತ್ತು ಜಯಪ್ರದಾ ನಂತರ, ಅವರು ತೆಲಂಗಾಣ ರಾಜಕೀಯದಲ್ಲಿ ಸಕ್ರಿಯರಾಗುತ್ತಿರುವ 80 ರ ದಶಕದ ಮೂರನೇ ನಟಿಯಾಗಿದ್ದಾರೆ.