ರಾಮನಗರ, ಆ 09 (DaijiworldNews/MS): ಮುಂಜಾನೆ ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿ ತುಳಿದು ಸಾಯಿಸಿರುವ ಘಟನೆ ಚೆನ್ನಮ್ಮನ ಹೊಸ ಹಳ್ಳಿ ಬಳಿ ಮಂಗಳವಾರ ನಡೆದಿದೆ.
ಸಿದ್ದಪ್ಪಾಜಿ ದೇವಾಲಯ ಅರ್ಚಕ ಚೆನ್ನಪ್ಪ ಅವರ ಪತ್ನಿ ಚೆನ್ನಮ್ಮ(65) ಆನೆ ದಾಳಿಗೆ ತುತ್ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎಂದಿನಂತೆ ಚೆನ್ನಮ್ಮ ಅವರು ತೋಟಕ್ಕೆ ತೆರಳಿ ಹಸುವಿನ ಹಾಲು ಕರೆಯುತ್ತಿದ್ದಾಗ ಏಕಾಏಕಿ ಅವರ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿ ತುಳಿದಿದೆ. ಮಹಿಳೆಯ ಕೂಗಾಟ, ಚೀರಾಟ ಕೇಳಿ ಅಕ್ಕ-ಪಕ್ಕದವರು ಸ್ಥಳಕ್ಕೆ ಬಂದು ಆನೆಯನ್ನು ಓಡಿಸುವಷ್ಟರೊಳಗೆ ಚೆನ್ನಮ್ಮ ಮೃತಪಟ್ಟಿದ್ದಾರೆ
.
ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬರುವಂತೆ ಒತ್ತಾಯಿಸಿ ಮೃತರ ಸಂಬಂಧಿಕರು ಪ್ರತಿಭಟನೆ ನಡೆಸಿದ್ದು, ಶವ ಎತ್ತಲು ಅವಕಾಶ ನೀಡಿಲ್ಲ.