ಪಾಟ್ನಾ, ಆ 09 (DaijiworldNews/MS): ಬಿಹಾರದಲ್ಲಿ ಜೆಡಿಯು - ಎನ್ಡಿಎ ಮೈತ್ರಿ ಮುರಿದುಬಿದ್ದಿದೆ. ಬಿಜೆಪಿ ಜೊತೆಗಿನ ಮೈತ್ರಿಯನ್ನು ಸಿಎಂ ನಿತೀಶ್ ಕುಮಾರ್ ಕೊನೆಗೊಳಿಸಿದ್ದು, ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಆರ್ ಜೆ ಡಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸುವ ಸಾಧ್ಯತೆ ಇದೆ.
2020ರಲ್ಲಿ ಬಿಹಾರ ವಿಧಾನಸಭೆಯ ಚುನಾವಣೆಯಲ್ಲಿ 243 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 77, ಜೆಡಿಯು 45, ಎಚ್ಎಎಂ 4, ಆರ್ಜೆಡಿ 80, ಕಾಂಗ್ರೆಸ್ 19, ಇತರರು 18 ಸ್ಥಾನಗಳನ್ನು ಪಡೆದುಕೊಂಡಿತ್ತು.
ಎರಡನೇ ಬಾರಿಗೆ ಬಿಜೆಪಿಯನ್ನು ತ್ಯಜಿಸುವ ನಿರ್ಧಾರಕ್ಕೆ ಬರುವ ಮುನ್ನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಶಾಸಕರೊಂದಿಗೆ ಸರಣಿ ಸಭೆಯನ್ನು ನಡೆಸಿದ್ದರು.