ನೋಯ್ಡಾ, ಆ 09 (DaijiworldNews/HR): ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಸ್ವಯಂಘೋಷಿತ ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿಯನ್ನು ಮಂಗಳವಾರ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ನೋಯ್ಡಾದ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಗುರಿಯಾಗಿರುವ ತ್ಯಾಗಿ ಮನೆಯನ್ನು ಬುಲ್ಡೋಜರ್ ನಿಂದ ಧ್ವಂಸಗೊಳಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತ್ಯಾಗಿ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದ.
ಇನನು ತ್ಯಾಗಿ ಉತ್ತರಾಖಂಡ್ ಗೆ ಪರಾರಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದ್ದು, ತ್ಯಾಗಿ ಮೊಬೈಲ್ ನೆಟ್ ವರ್ಕ್ ಟ್ರೇಸ್ ಮಾಡಿದಾಗ ಆತ ಹರಿದ್ವಾರ ಮತ್ತು ಋಷಿಕೇಶದ ಸ್ಥಳದಲ್ಲಿರುವುದಾಗಿ ಪತ್ತೆಯಾಗಿದ್ದು ಇಂದು ಬಂಧಿಸಿದ್ದಾರೆ.