ಪಾಟ್ನಾ, ಆ 09 (DaijiworldNews/MS): ಬಿಹಾರದಲ್ಲಿರುವ ಆಡಳಿತಾರೂಢ ಜೆಡಿಯು – ಬಿಜೆಪಿ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಂಡಿರುವ ನಡುವೆ ರಾಜಕೀಯ ಡೊಂಬರಾಟ ತೀವ್ರವಾಗಿದ್ದು ಬಿಜೆಪಿಯೊಂದಿಗೆ ಮೈತ್ರಿ ಕೊನೆಗೊಳಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಲ್ಲಿ ಬಿಜೆಪಿ ಕೈವಾಡವಿರುವುದು ಖಚಿತವಾಗುತ್ತಿದ್ದಂತೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದು ಆರ್ ಜೆ ಡಿ ಮತ್ತು ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಲಿದ್ದು , ರಾಜೀನಾಮೆ ಸಲ್ಲಿಸಲು ರಾಜ್ಯಪಾಲ ಭೇಟಿಗೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಈ ಎಲ್ಲಾ ಬೆಳವಣಿಗೆಯ ನಡುವೆ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಬೇಕಾಗಿದ್ದ ಬಿಜೆಪಿ ಕೋಟಾದ ೧೬ ಸಚಿವರು , ಕಾದು ನೋಡುವ ತಂತ್ರ ಅನುಸರಿಸಿದ್ದು ಹೀಗಾಗಿ ಬಿಹಾರ ರಾಜಕೀಯದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿಎಂ ನಿತೀಶ್ ಮುಂದಿನ ನಡೆ ಬಳಿಕ ಬಿಜೆಪಿ ಪ್ರತಿಕ್ರಿಯಿಸಲಿದೆ ಎಂದಿರುವ ಬಿಜೆಪಿ ಮಧ್ಯಾಹ್ನ 1.30 ಕ್ಕೆ ಸುದ್ದಿಗೋಷ್ಟಿ ಕರೆದಿದೆ.