ಲಕ್ನೋ, ಆ 09 (DaijiworldNews/MS): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವ ಬೆದರಿಕೆಯ ವಾಟ್ಸಾಪ್ ಸಂದೇಶ ಮತ್ತೊಮ್ಮೆ ರಾಜ್ಯ ಪೊಲೀಸರ ಸಹಾಯವಾಣಿ ಸಂಖ್ಯೆಗೆ ಬಂದಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಪೊಲೀಸರ ಪ್ರಕಾರ ಸಹಾಯವಾಣಿ ಸಂಖ್ಯೆ112 ಯ ವಾಟ್ಸಾಪ್ ಸಂಖ್ಯೆ ಶಾಹಿದ್ ಎಂಬ ವ್ಯಕ್ತಿಯಿಂದ ಸಂದೇಶ ಬಂದಿದ್ದು,ಇನ್ನು ಮೂರು ದಿನದೊಳಗೆ ಬಾಂಬ್ ಸ್ಫೋಟಿಸಿ ಹತ್ಯೆಗೈಯಲಾಗುವುದು ಎಂದು ಬೆದರಿಕೆಯೊಡ್ಡಲಾಗಿದೆ.
ಈ ಬಗ್ಗೆ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಸ್ಟೇಷನ್ ಕಮಾಂಡರ್ ಸುಭಾಷ್ ಕುಮಾರ್ ಸೋಮವಾರ ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಮೊದಲು ಕೂಡಾ ಹಲವಾರು ಬಾರಿ ಬೆದರಿಕೆ ಸಂದೇಶ ಬಂದಿತ್ತು.