ಮುಂಬೈ, ಆ 09 (DaijiworldNews/HR): ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವ ಸರ್ಕಾರ ರಚನೆಯಾಗಿ 40 ದಿನಗಳ ಬಳಿಕ 18 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರಾಜಭವನದಲ್ಲಿ ಪ್ರಮಾಣ ವಚನ ಬೋಧಿಸಿದ್ದು,18 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಏಕನಾಥ್ ಶಿಂಧೆ ಹಾಗೂ ದೇವೇಂದ್ರ ಫಡ್ನವೀಸ್ ಸರ್ಕಾರ ಜೂನ್ 30, 2022 ರಂದು ರಚನೆಯಾಗಿದ್ದು, ಸಚಿವ ಸಂಪುಟ ವಿಸ್ತರಣೆಯಲ್ಲಿ ಒಂಬತ್ತು ಬಿಜೆಪಿ ನಾಯಕರು ಮತ್ತು ಒಂಬತ್ತು ಶಿವಸೇನೆ ನಾಯಕರು ಇದ್ದು, ಅವರೆಲ್ಲರೂ ಇದೀಗ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಇನ್ನು ಶಿವಸೇನಾದ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಆಡಳಿತ ನಡೆಸುತ್ತಿದ್ದ ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ವಿರುದ್ಧ ಏಕನಾಥ ಶಿಂಧೆ ಬಂಡಾಯವೆದ್ದಿದ್ದು, ಬಳಿಕ ಶಿವಸೇನಾದಲ್ಲಿ ಉದ್ಧವ್ ಮತ್ತು ಶಿಂಧೆ ಬಣ ರೂಪುಗೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದೆ.