ಕೊಯಮತ್ತೂರು, ಆ 09 (DaijiworldNews/HR): ತನ್ನ ಮದುವೆಯಂದು ಮಸೀದಿಯೊಳಗೆ ಮಧು ಒಬ್ಬಳು ಎಂಟ್ರಿಕೊಟ್ಟು ಹೊಸ ಇತಿಹಾಸ ಬರೆದಿರುವ ಘಟನೆ ಕೇರಳದ ಕೊಯಮತ್ತೂರಿನಲ್ಲಿ ನಡೆದಿದೆ.
ಮುಸ್ಲಿಂ ಸಂಪ್ರದಾಯದ ಪ್ರಕಾರ, ಮದುಮಗಳು ತನ್ನ ಮದುವೆಗೆ ತಾನು ಹಾಜರು ಆಗುವುದಿಲ್ಲ. ಏಕೆಂದರೆ ಮದುವೆಯೆಂಬುದು ಇಸ್ಲಾಂನಲ್ಲಿ ಮದುಮಗ ಮತ್ತು ಮದುಮಗಳ ಅಪ್ಪನ ನಡುವೆ ನಡೆಯುವ ಒಪ್ಪಂದ. ಆದ್ದರಿಂದ ಮದುಮಗನ ಜತೆಗೆ ಮದುಮಗಳ ಅಪ್ಪ ವಿವಾಹದ ಸಂದರ್ಭದಲ್ಲಿ ಹಾಜರು ಇರುತ್ತಾರೆ. ಆದರೆ ಇದೀಗ ಕೇರಳದ ಮದುಮಗಳು ಹಾಗೂ ಆಕೆಯ ತಂದೆ ಆ ಪದ್ಧತಿಯನ್ನು ಮೀರಿ ಹೊಸ ದಾಖಲೆ ಬರೆದಿದ್ದಾರೆ.
ಇನ್ನು ಬಹುತೇಕ ಅಪ್ಪಂದಿರಂತೆ ತಮ್ಮ ಮಗಳ ಅದ್ಧೂರಿ ಮದುವೆಯ ಕನಸುನ್ನು ಕೆ.ಎಸ್.ಉಮ್ಮರ್ ಅವರು ಕಂಡಿದ್ದರು. ಆದರೆ ಅವರಿಗೆ ಮಗಳ ಮದುವೆಯಂದು ಆಕೆಯೇ ಹಾಜರು ಇಲ್ಲದಿದ್ದರೆ ಅಷ್ಟೇನೂ ಚೆನ್ನಾಗಿರಲಿಲ್ಲ ಎನ್ನಿಸಿದೆ. ಆದರೆ ತಮ್ಮ ಸಂಪ್ರದಾಯದಲ್ಲಿ ಮದುಮಗಳು ತನ್ನ ಮದುವೆಗೆ ಹೋಗುವ ಅವಕಾಶ ಇಲ್ಲ ಎನ್ನುವುದು ಅವರನ್ನು ಬೇಸರಕ್ಕೆ ತಳ್ಳಿದೆ. ಆದರೂ ಅವರು ಗಟ್ಟಿ ಮನಸ್ಸು ಮಾಡಿ, ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ಇಸ್ಲಾಂನಲ್ಲಿ ಯಾವುದೇ ಸ್ಥಾನವಿಲ್ಲದ ಇಂತಹ ಆಚರಣೆಗಳನ್ನು ನಾವು ತಿರಸ್ಕರಿಸುವ ಸಮಯ ಬಂದಿದೆ. ನನ್ನ ಮಗಳು ಸೇರಿದಂತೆ ವಧುಗಳಿಗೆ ಅವರ ಮದುವೆಗೆ ಸಾಕ್ಷಿಯಾಗುವ ಹಕ್ಕಿದೆ. ಆದ್ದರಿಂದ ಇಂಥದ್ದೊಂದು ತೀರ್ಮಾನಕ್ಕೆ ಬಂದೆವು ಎಂದಿದ್ದಾರೆ.
ಇವರ ಈ ನಿರ್ಧಾರಕ್ಕೆ ಪರ, ವಿರೋಧ ಚರ್ಚೆಗಳು ನಡೆಯುತ್ತಿದೆ.