ಹೈದರಾಬಾದ್, ಆ 09 (DaijiworldNews/HR): ತೆಲಂಗಾಣದ ಬಿಜೆಪಿ ನಾಯಕ ಜ್ಞಾನೇಂದ್ರ ಪ್ರಸಾದ್ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ.
ಮಿಯಾಪುರ್ ಪೊಲೀಸ್ ಠಾಣೆಗೆ ಬಂದ ಫೋನ್ ಕರೆ ಆಧರಿಸಿ ಜ್ಞಾನೇಂದ್ರ ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಮನೆಯ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ.
ಇನ್ನು ಆತ್ಮಹತ್ಯೆಗೆ ಕಾರಣ ತನಿಖೆಯಿಂದಷ್ಟೇ ಗೊತ್ತಾಗಬೇಕಿದ್ದು, ಶವವನ್ನು ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ವರ್ಗಾಯಿಸಲಾಗಿದೆ.
ಈ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.