ಪಾಟ್ನಾ, ಆ 08 (DaijiworldNews/DB): ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರ ಜೆಡಿಯು ಪಕ್ಷವು ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡಲ್ಲಿ ಜೆಡಿಯು ಬೆಂಬಲಿಸಲು ಸಿದ್ದ ಎಂದು ಪ್ರತಿಪಕ್ಷ ಆರ್ಜೆಡಿ ಪಕ್ಷವು ಸೋಮವಾರ ಹೇಳಿದೆ.
ಆರ್ಜೆಡಿ ರಾಷ್ಟ್ರೀಯ ಉಪಾಧ್ಯಕ್ಷ ಶಿವಾನಂದ್ ತಿವಾರಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಯು ಮತ್ತು ಬಿಜೆಪಿ ನಡುವೆ ಭಿನ್ನಮತ ಸ್ಪೋಟಗೊಂಡಿದ್ದು, ಎರಡೂ ಪಕ್ಷಗಳ ನಡುವೆ ಪರಿಸ್ಥಿತಿ ಬಿಗಡಾಯಿಸಿದೆ. ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣ ತಿಳಿದಿಲ್ಲ. ಆದರೆ ಸಾಕಷ್ಟು ಸದಸ್ಯಬಲ ಹೊಂದಿರುವ ಎರಡೂ ಪಕ್ಷಗಳ ನಡುವೆ ನಡೆಯುತ್ತಿರುವ ಕಚ್ಚಾಟ, ಇದಕ್ಕಾಗಿ ಅವರು ಸಭೆ ಕರೆದಿರುವುದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಜೆಡಿಯು ಬಿಜೆಪಿಯೊಂದಿಗೆ ಮೈತ್ರಿಗೆ ವಿದಾಯ ಹೇಳಿದಲ್ಲಿ ನಾವು ಜೆಡಿಯುವಿನೊಂದಿಗೆ ಕೈ ಜೋಡಿಸುತ್ತೇವೆ ಎಂದಿದ್ದಾರೆ.
ಬಿಜೆಪಿ ವಿರುದ್ದದ ಹೋರಾಟಕ್ಕೆ ಆರ್ಜೆಡಿ ಬದ್ದವಾಗಿದೆ. ಸಿಎಂ ನಿತೀಶ್ಕುಮಾರ್ ಅವರೂ ಈ ಹೋರಾಟಕ್ಕೆ ಕೈ ಜೋಡಿಸಿದರೆ ಅವರಿಗೆ ಸ್ವಾಗತ. ಎನ್ಡಿಎಯನ್ನು ಅವರು ತ್ಯಜಿಸುವುದಾದರೆ ಅವರ ಜೊತೆ ಸೇರುತ್ತೇವೆ ಎಂದರು.