ಹಿಮಾಚಲ ಪ್ರದೇಶ, ಆ 08 (DaijiworldNews/HR): ಭಾರೀ ಮಳೆಯ ಆರ್ಭಟಕ್ಕೆ ಹಿಮಾಚಲ ಪ್ರದೇಶದ ಚಂಬಾ ಪ್ರದೇಶದಲ್ಲಿ ಸೋಮವಾರ ಮೇಘಸ್ಫೋಟಗೊಂಡಿದ್ದು, 15 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಭಡೋಗಾದಲ್ಲಿ ವಿಜಯ್ ಕುಮಾರ್ (15) ಮೃತಪಟ್ಟ ಬಾಲಕ.
ಚಂಬಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (ಡಿಇಒಸಿ) ಭಾನುವಾರ ಮತ್ತು ಸೋಮವಾರದ ಮಧ್ಯ ರಾತ್ರಿಯಲ್ಲಿ ಭಡೋಗಾ ಮತ್ತು ಕಂಧ್ವಾರಾ ಗ್ರಾಮಗಳು ಹಠಾತ್ ಭಾರಿ ಮಳೆಯಿಂದ ಹಾನಿಗೀಡಾಗಿವೆ ಎಂದು ಹೇಳಿದೆ.
ಇನ್ನು ಮಳೆಗೆ ಕೆಲವು ಮನೆಗಳು ನೀರಿನ ಆವೃತಗೊಂಡಿದ್ದು, ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ತಿಳಿಸಿದ್ದಾರೆ.