ನವದೆಹಲಿ, ಆ 08 (DaijiworldNews/HR): ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಅವಧಿ ಪೂರ್ಣಗೊಳಿಸಿ ಆಗಸ್ಟ್ 10 ರಂದು ನಿವೃತ್ತರಾಗುತ್ತಿದ್ದು, ಅವರನ್ನು ಇಂದು ಆತ್ಮೀಯವಾಗಿ ಬೀಳ್ಕೊಡುವ ಸಮಾರಂಭ ನಡೆಯಿತು.
ರಾಜ್ಯಸಭೆಯಲ್ಲಿ ವೆಂಕಯ್ಯ ನಾಯ್ಡು ಅವರಿಗೆ ವಂದನಾರ್ಪಣೆ ಮಾಡಿದ ಪ್ರಧಾನಿ ಮೋದಿ, ನಿರ್ಗಮಿಸುತ್ತಿರುವ ಉಪರಾಷ್ಟ್ರಪತಿಯವರು ತಮ್ಮ ಉತ್ತರಾಧಿಕಾರಿಗಳಿಗೆ ಮಾರ್ಗದರ್ಶನ ನೀಡುವಂತಹ ಗುಣಮಟ್ಟ ಮತ್ತು ಪರಂಪರೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದಿದ್ದಾರೆ.
ಇನ್ನು ವೆಂಕಯ್ಯ ನಾಯ್ಡು ಅವರೊಂದಿಗೆ ದೀರ್ಘ ಅವಧಿಯಿಂದಲೂ ಕೆಲಸ ಮಾಡಿದ್ದು, ಅವರು ವಿವಿಧ ಹುದ್ದೆಗಳನ್ನು ಸಮರ್ಪಣೆಯಿಂದ ನಿರ್ವಹಿಸಿದ್ದನ್ನು ಕಂಡಿದ್ದೇನೆ ಎಂದು ಹೇಳಿದ್ದಾರೆ.