ಬೆಂಗಳೂರು, ಆ 08 (DaijiworldNews/MS): ತಿರಂಗಾ ’ ಡಿಪಿ ’ ಬದಲಿಸುವ ಪ್ರಧಾನಿ ಕರೆಗೆ ಅರೆಸೆಸ್ಸ್ ಏಕೆ ಒಗ್ಗೊಟ್ಟಿಲ್ಲ, ಈ ಸಂಘಟನೆ ಭಾರತೀಯತೆಯನ್ನು ಒಪ್ಪಿಲ್ಲವೇ ಎಂದು ಕಾಂಗ್ರೆಸ್ ಕೇಳಿದೆ.
ದೇಶದ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದು ಇದರ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಆರಂಭಗೊಂಡಿದೆ.ಇನ್ನು ಮನ್ ಕಿ ಬಾತ್ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳ ಡಿಪಿಯಲ್ಲಿ ತಿರಂಗಾ ಹಾಕುವಂತೆ ಹೇಳಿದ್ದರು. ಸ್ವತಃ ಮೋದಿ ಅವರೇ ತಮ್ಮ ಟ್ವಿಟರ್, ಇನ್ಸ್ಟಾಗ್ರಾಮ್ ಖಾತೆಯ ಡಿಪಿ ಬದಲಾಯಿಸಿದ್ದರು. ಪ್ರಧಾನಿ ಕರೆಗೆ ದೇಶದ ಬಹಳಷ್ಟು ಜನತೆ ತಮ್ಮ ಸಾಮಾಜಿಕ ತಾಲತಾಣದ ಡಿಸ್ಪ್ಲೇ ಗಳಲ್ಲಿ ತಿರಂಗಾ ಬದಲಾಯಿಸಿದ್ದರು.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕ , "ಅರೆಸೆಸ್ಸ್ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಅರೆಸೆಸ್ಸ್ , ಭಾರತದಲ್ಲಿನ ತಾಲಿಬಾನ್ ಇದ್ದಂತೆ. ತಿರಂಗಾ ಡಿಪಿ ಬದಲಿಸುವ ಪ್ರಧಾನಿ ಕರೆ ಅರೆಸೆಸ್ಸ್ ಗೆ ಅನ್ವಯಿಸುವುದಿಲ್ಲವೇ? ತಿರಂಗಾ ಮೇಲಿನ ಅಸಹನೆ, ದ್ವೇಷ ಸುಪ್ತವಾಗಿ ಮುಂದುವರೆದಿದೆಯೇ ಎಂದು ಕೇಳಿದೆ.
ಅರೆಸೆಸ್ಸ್ ಸಂಘಟನೆಯೂ ಪ್ರಧಾನಿ ತಿರಂಗಾ ಕರೆಯನ್ನು ಒಪ್ಪದಿರುವುದೇಕೆ ಎಂದು ಕಾಂಗ್ರೆಸ್ ಪಕ್ಷವೂ, ಬಿಜೆಪಿಯನ್ನು ಪ್ರಶ್ನಿಸಿದೆ.