ನವದೆಹಲಿ, ಆ 08 (DaijiworldNews/DB): ದೇಶದಲ್ಲಿ ನಿರುದ್ಯೋಗ ಸಮಸ್ಯೆ ಪಾಕಿಸ್ತಾನ, ಶ್ರೀಲಂಕಾಗಿಂತಲೂ ಕೆಟ್ಟ ಸ್ಥಿತಿಯಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶ ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಆದರೆ ಜಾಗತಿಕ ನಿರುದ್ಯೋಗದ ಸೂಚ್ಯಂಕ ಮರು ಪ್ರಕಟಗೊಂಡಿದ್ದು, ದೇಶದ ನಿರುದ್ಯೋಗ ಪ್ರಮಾಣ ದಯನೀಯ ಸ್ಥಿತಿಗೆ ತಲುಪಿದೆ. ಮನೆಮನೆಗೆ ಉದ್ಯೋಗ ತಲುಪಿಸುವ ಅಗತ್ಯವಿದೆ. ಆದರೆ ಮನೆಮನೆಯಲ್ಲೂ ನಿರುದ್ಯೋಗವಿದೆ ಎಂದಿದ್ದಾರೆ.
15ರಿಂದ 24 ವರ್ಷದೊಳಗಿನ ನಿರುದ್ಯೋಗದ ಪ್ರಮಾಣ ಜಪಾನ್ನಲ್ಲಿ ಶೇ.4.4ರಷ್ಟಿದ್ದರೆ, ಜರ್ಮನಿಯಲ್ಲಿ ಶೇ.6.9ರಷ್ಟಿದೆ, ಇಸ್ರೇಲ್ನಲ್ಲಿ ಶೇ.8.8, ಪಾಕಿಸ್ತಾನದಲ್ಲಿ 9.4, ನೇಪಾಳದಲ್ಲಿ ಶೇ.9.5, ಅಮೆರಿಕಾದಲ್ಲಿ ಶೇ.9.6, ಶ್ರೀಲಂಕಾದಲ್ಲಿ ಶೇ.26.1ರಷ್ಟಿದ್ದರೆ, ಭಾರತದಲ್ಲಿ ಶೇ.28.3ರಷ್ಟು ನಿರುದ್ಯೋಗ ಪ್ರಮಾಣ ಇದೆ ಎಂದವರು ಬರೆದುಕೊಂಡಿದ್ದಾರೆ.