ಮೈಸೂರು, ಆ 08 (DaijiworldNews/HR): ಬಿಜೆಪಿಯವರು ಹರ್ ಘರ್ ತಿರಂಗ ಎಂದು ನಾಟಕವಾಡುತ್ತಿದ್ದಾರೆ. ನಾವು ಗೌರವದಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ ಎಂದು ಬಿಜೆಪಿ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಮೃತಮಹೋತ್ಸವದಿಂದ ಬಿಜೆಪಿಯವರಿಗೆ ನಮ್ಮ ಬಗ್ಗೆ ಭಯ ಶುರುವಾಗಿದ್ದು, ಅವರು ಹರ್ ಘರ್ ತಿರಂಗ ಎಂದು ನಾಟಕವಾಡುತ್ತಿದ್ದಾರೆ. ನಾವು ಗೌರವದಿಂದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಆತ್ಮನಿರ್ಭರ ಎಂದರೇನು?ಆಮದು ಹೆಚ್ಚಾಗಿದೆಯಾ? ರಪ್ತು ಹೆಚ್ಚಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಮಳೆಯಿಂದ ಅಪಾರ ಹಾನಿಯಾಗಿದ್ದು, ಭಾರತದಲ್ಲೂ ಶ್ರೀಲಂಕಾ ಪರಿಸ್ಥಿತಿ ಎದುರಾದ್ರು ಆಶ್ಚರ್ಯವಿಲ್ಲ. ಈಗ ಬಿಜೆಪಿಯವರು ಹರ್ ಘರ್ ತಿರಂಗ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.