ಸಿಕಾರ್, ಆ 08 (DaijiworldNews/MS): ರಾಜಸ್ಥಾನದ ಸಿಕಾರ್ನಲ್ಲಿರುವ ಖಟು ಶ್ಯಾಮ್ ಜಿ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಚಂದ್ರಮಾನ ಕ್ಯಾಲೆಂಡರ್ ನ 11 ನೇ ದಿನವಾದ ಇಂದು ಭಗವಾನ್ ಕೃಷ್ಣನ ಅವತಾರವೆಂದು ನಂಬಲಾದ ಖಟು ಶ್ಯಾಮ್ ಜಿಯ ದರ್ಶನಕ್ಕೆ ಮಂಗಳಕರವೆಂದು ಪರಿಗಣಿಸಲಾಗಿದೆ.
ಹೀಗಾಗಿ ದೇವಾಲಯದ ಹೊರಗೆ ಭಕ್ತರ ಜನಸಮೂಹವೇ ಜಮಾಯಿಸಿದ್ದು ಗೇಟ್ ತೆರೆಯುಲು ಕಾಯುತ್ತಿತ್ತು.
ಗೇಟ್ಗಳು ತೆರೆಯುತ್ತಿದ್ದಂತೆ ಜನರೆಲ್ಲ ಒಳಗೆ ನುಗ್ಗಲು ತಳ್ಳಲು ಯತ್ನಿಸಿದ ತಕ್ಷಣ ಮಹಿಳೆಯೊಬ್ಬರು ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯ ಹಿಂದೆ ಇದ್ದವರು ಕೂಡ ಬಿದ್ದಿದ್ದಾರೆ ಎಂದು ವರದಿಯಾಗಿದೆ. ನಂತರ ಗೊಂದಲ ಏರ್ಪಟ್ಟಿದ್ದು ಮೂವರು ಮಹಿಳೆಯರು ಪ್ರಾಣ ಕಳೆದುಕೊಂಡ ಇಬ್ಬರು ಗಾಯಗೊಂಡರು.
ಕೂಡಲೇ ದೇವಸ್ಥಾನಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಗುಂಪನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.