ಹುಬ್ಬಳ್ಳಿ, ಆ 07 (DaijiworldNews/HR): ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಜಿಗಳೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ದರ್ಗಾಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿ, ಓರ್ವ ಮಹಿಳೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ಸಂಬಂಧಿಕರ ಮನೆ ಗೃಹ ಪ್ರವೇಶ ಮುಗಿಸಿಕೊಂಡು ಹುಬ್ಬಳ್ಳಿಯ ನವನಗರಕ್ಕೆ ವಾಪಸ್ಸಾಗುತ್ತಿದ್ದಾಗ ವೇಳೆ ನಿಯಂತ್ರಣ ತಪ್ಪಿ ಕಾರು ದರ್ಗಾಕ್ಕೆ ನುಗ್ಗಿದ್ದು, ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ಧಾರವಾಡ ಕೆ.ಯು.ಡಿ. ಯ ಎಇಇ ರವೀಂದ್ರ ನಾಗನಾಥ, ಈತನ ಅತ್ತೆ ಮಾವನವರಾದ ಸ್ಟಾಫ್ ನರ್ಸ್ ಗಳಾಗಿದ್ದ ಹನುಮಂತಪ್ಪ ಬೇವಿನಕಟ್ಟಿ, ರೇಣುಕಾ ಬೇವಿನಕಟ್ಟಿ ಎಂದು ಗುರುತಿಸಲಾಗಿದೆ.
ಇನ್ನು ರವೀಂದ್ರ ಪತ್ನಿ ಅರುಂಧತಿಗೆ ಗಂಭೀರ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.