ಮುಂಬೈ, ಆ 07 (DaijiworldNews/HR): ಭಾರತೀಯ ಷೇರುಪೇಟೆಯ ರಾಕೇಶ್ ಜುಂಜುನ್ವಾಲಾ ಮಾಲೀಕತ್ವದ 'ಆಕಾಶ ಏರ್' ಕಂಪನಿಯ ಮೊದಲ ವಿಮಾನ ಹಾರಾಟ ಇಂದಿನಿಂದ ಪ್ರಾರಂಭವಾಗಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ವಿಮಾನ ಸಂಚಾರಕ್ಕೆ ಚಾಲನೆ ನೀಡಿದ್ದು, ಈ ವಿಮಾನ ಅಹಮದಾಬಾದ್ ನಿಲ್ದಾಣದಲ್ಲಿ ಬಂದು ಇಳಿಯಿತು
ಇನ್ನು ಕಳೆದ ಜುಲೈ 7ರಂದು ನಾಗರಿಕ ವಿಮಾನಯಾನ ಇಲಾಖೆಯಿಂದ ವಿಮಾನ ಸಂಚಾರಕ್ಕೆ ಅನುಮತಿ ಪಡೆದುಕೊಂಡಿದ್ದು, ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ ಆಗಸ್ಟ್ 13ರಿಂದ ವಿಮಾನ ಸಂಚಾರವನ್ನು ಕಂಪನಿ ಆರಂಭಿಸಲಿದೆ.