ಬಳ್ಳಾರಿ, ಆ 07 (DaijiworldNews/DB): ಕಲುಷಿತ ನೀರು ಕುಡಿದು 80ಕ್ಕೂ ಅಧಿಕ ಮಂದಿ ಅಸ್ವಸ್ಥರಾದ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಂಕಮನಾಳ ಗ್ರಾಮದಲ್ಲಿ ನಡೆದಿದೆ.
ಶನಿವಾರ ಸಂಜೆ ಘಟನೆ ಸಂಭವಿಸಿದ್ದು, ಮೊದಲು ಒಟ್ಟು 50 ಮಂದಿಗೆ ಕಲುಷಿತ ನೀರು ಸೇವನೆಯಿಂದ ವಾಂತಿ ಬೇಧಿಯಂತಹ ಸಮಸ್ಯೆಗಳು ಕಾಣಿಸಿಕೊಂಡಿತು. ಇದೀಗ ಮತ್ತೆ 34 ಮಂದಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ. ಸದ್ಯ ಅಸ್ವಸ್ಥರಾದ ಎಲ್ಲರನ್ನೂ ಅಂಕಮನಾಳ ಗ್ರಾಮದ ತಾತ್ಕಾಲಿಕ ಆಸ್ಪತ್ರೆ, ಸಂಡೂರು ತಾಲೂಕಾಸ್ಪತ್ರೆ, ಬಳ್ಳಾರಿ ವಿಮ್ಸ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಆರೋಗ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಧಾವಿಸಿದ್ದು ತಪಾಸಣೆ ನಡೆಸಿದ್ದಾರೆ. ಕಲುಷಿತ ನೀರಿನ ಕುರಿತಾಗಿ ಜನ ಆತಂಕಗೊಂಡಿದ್ದಾರೆ.