ಬೆಂಗಳೂರು, ಆ 07 (DaijiworldNews/DB): ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಕಟ್ಟಿ ಹಾಕಿದ್ದ ಹಸುಗಳ ಮೇಲೆ ವಿಕೃತಿ ಮೆರೆದಿದ್ದ ಸೈಕಾಪಾಥ್ನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಮದ್ದೂರು ಮೂಲದ ಮಂಜುನಾಥ್ ಬಂಧಿತ ಆರೋಪಿ. ನಾಯಂಡಹಳ್ಳಿ ಬಳಿ ಶಶಿಕುಮಾರ್ ಎಂಬುವರು ಮೇಯಲೆಂದು ಕಟ್ಟಿ ಹಾಕಿದ್ದ ಹಸುಗಳ ಮೇಲೆ ಮಾಲಕ ಇಲ್ಲದ ವೇಳೆಯಲ್ಲಿ ವಿಕೃತಿ ಮೆರೆದಿದ್ದ. ಹಸುವನ್ನು ಪೊದೆಗೆ ಎಳೆದೊಯ್ದು ಕೆಚ್ಚಲು ಕಚ್ಚಿ, ಬಾಲ ಕತ್ತರಿಸಿ ಹಿಂಸೆ ನೀಡುತ್ತಿದ್ದ. ಬೆತ್ತಲಾಗಿ ಹಸುವಿನ ಜೊತೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೂ ಈತ ಯತ್ನಿಸಿದ್ದ ಎಂದು ತಿಳಿದು ಬಂದಿದೆ.
ಹಸುವಿಗೆ ಹಿಂಸೆ ನೀಡಿದ ಸಂಬಂಧ ಈತನ ವಿರುದ್ದ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.