ನವದೆಹಲಿ, ಆ 06 (DaijiworldNews/MS): ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾಫ್ಟ್ವೇರ್ ದೈತ್ಯ ಗೂಗಲ್ ಇಂಡಿಯಾ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ಇದಕ್ಕೆ 'ಇಂಡಿಯಾ ಕೀ ಉಡಾನ್' ಎಂಬ ಶೀರ್ಷಿಕೆ ನೀಡಲಾಗಿದೆ.
ರಾಷ್ಟ್ರವ್ಯಾಪಿ ಅಮೃತಮಹೋತ್ಸವ ಆಚರಣೆಗಳ ಭಾಗವಾಗಿ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ 'ಇಂಡಿಯಾ ಕಿ ಉಡಾನ್' ಎಂಬ ಡಿಜಿಟಲ್ ವಿಡಿಯೋ ಸಂಗ್ರಹವನ್ನು ಬಿಡುಗಡೆ ಮಾಡಿದೆ
ಈ ವಿಡಿಯೋದಲ್ಲಿ ಭಾರತದ ಮೊದಲ ಸರ್ಕಾರ, ವಿಜ್ಞಾನ, ತಂತ್ರಜ್ಞಾನ, ಕೃಷಿ, 1983ರ ಮೊದಲ ವಿಶ್ವಕಪ್ ಗೆಲುವು, ಒಲಿಂಪಿಕ್ಸ್ ಸೇರಿ ದೇಶದ ಹಲವು ಸಾಧನೆಗಳ ಬಗ್ಗೆ ಹೇಳಲಾಗಿದೆ. ಭಾರತದ ಯಶಸ್ವಿ ಪಯಣವನ್ನು ಜತೆಗೂಡಿ ಸಂಭ್ರಮಿಸೋಣ ಎಂದು ಗೂಗಲ್ ಇಂಡಿಯಾ ಹೇಳಿದೆ. ಈ ವಿಡಿಯೋವನ್ನು ಸಂಸ್ಥೆ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.