ನವದೆಹಲಿ,ಆ 06 (DaijiworldNews/MS): ಭಾರತದಲ್ಲಿ 2020ರಲ್ಲಿ ನಿಷೇಧವಾಗಿದ್ದ ಶಾರ್ಟ್ ವಿಡಿಯೋ ಅಪ್ಲಿಕೇಶನ್ ಟಿಕ್ಟಾಕ್ ಮತ್ತೆ ವಾಪಾಸ್ ಆಗಲಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಟಿಕ್ಟಾಕ್ ನ್ನು ಮತ್ತೆ ಆರಂಭಿಸುವ ಬಗ್ಗೆ ಮುಂಬೈ ಮೂಲದ ಕಂಪನಿ 'ಸ್ಕೈಸ್ಪೋರ್ಟ್ಸ್' ಟಿಕ್ಟಾಕ್ನ ಮೂಲ ಸಂಸ್ಥೆಯಾದ 'ಬೈಟ್ಡ್ಯಾನ್ಸ್' ನೊಂದಿಗೆ ಮಾತುಕತೆ ನಡೆಸುತ್ತಿದೆ.
'ಶೀಘ್ರದಲ್ಲೇ ಟಿಕ್ಟಾಕ್ ದೇಶಕ್ಕೆ ಎಂಟ್ರಿಕೊಡಲಿದೆ' ಎಂದು ಭಾರತದ ಪ್ರಮುಖ ಈಸ್ಪೋರ್ಟ್ಸ್ ಮತ್ತು ಗೇಮಿಂಗ್ ಕಂಪನಿಯ 'ಸ್ಕೈಸ್ಪೋರ್ಟ್ಸ್ ಸಂಸ್ಥೆಯ ಸಿಇಒ ಶಿವಾನಂದಿ ಟಿಕ್ಟಾಕ್ ಅಪ್ಲಿಕೇಶನ್ ಮಾಹಿತಿ ನೀಡಿದ್ದಾರೆ. ಇನ್ನು, 'ಬೈಟ್ಡ್ಯಾನ್ಸ್' ಇದೇ ವಿಚಾರವಾಗಿ ಕಳೆದ ತಿಂಗಳು 'ಹಿರಾನಂದನಿ' ಕಂಪನಿಯೊಂದಿಗೆ ಮಾತುಕತೆ ನಡೆಸಿತ್ತು.
ದೇಶದಲ್ಲಿ 2020ರಲ್ಲಿ ಟಿಕ್ ಟಾಕ್ ಸೇರಿ ಸುಮಾರು ೫೬ ಚೀನಾದ ಆಪ್ ಗಳನ್ನುಭಾರತ ಸರ್ಕಾರ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು.