ನವದೆಹಲಿ, ಆ 06 (DaijiworldNews/MS): ಭಾರತದ ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ಎನ್ಡಿಎ ಪರವಾಗಿ ಕಣಕ್ಕಿಳಿದಿದ್ದ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಧನಕರ್, ಭರ್ಜರಿ ಜಯ ಸಾಧಿಸಿದ್ದಾರೆ.
ರಾಜಸ್ಥಾನ ಮೂಲದ 71 ವರ್ಷ ಜಗದೀಪ್ ಧನಕರ್ ಸಮಾಜವಾದಿ ಹಿನ್ನೆಲೆಯ ಜಾಟ್ ನಾಯಕ ಜಗದೀಪ್ ಧನಕರ್ ಈ ಹಿಂದೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆಯಲ್ಲಿದ್ದರು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ 725 ಸಂಸದರಿಂದ ಮತದಾನ ಮಾಡಿದ್ದರು. ಈ ಪೈಕಿ NDA ಅಭ್ಯರ್ಥಿ 528 ಮತಗಳನ್ನು ಪಡೆದುಕೊಂಡಿದ್ದರೆ, ಪ್ರತಿಪಕ್ಷ ಅಭ್ಯರ್ಥಿ ಅಲ್ವಾ 182 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಇನ್ನೂ ಆಗಸ್ಟ್ 11ರಂದು ಧನಕರ್ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಯಾಗಿದ್ದ ಕರ್ನಾಟಕ ಮೂಲದ 80 ವರ್ಷದ ಮಾರ್ಗರೆಟ್ ಆಳ್ವ ಪರಾಭವಗೊಂಡಿದ್ದಾರೆ.