ಬೆಂಗಳೂರು, ಆ 06 (DaijiworldNews/HR): ಶಾಸಕ ಜಮೀರ್ ಅಹ್ಮದ್ ಅವರ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಅವರನ್ನು ಇಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದು, ಅದರಂತೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಜೂನ್ 5 ರಂದು ಜಮೀರ್ ಅಹ್ಮದ್ ಮನೆ ಮೇಲೆ ಎಸಿಬಿ ದಾಳಿ ನಡೆದಿದ್ದು, ದಾಳಿ ವೇಳೆ ಹಲವು ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಎಸಿಬಿ ಕಚೇರಿಯಲ್ಲಿ ಎಸಿಬಿ ಎಸ್ ಯತೀಶ್ ಚಂದ್ರ, ಡಿವೈಎಸ್ಪಿ ರವಿ ಶಂಕರ್ ನೇತೃತ್ವದಲ್ಲಿ ಜಮೀರ್ ವಿಚಾರಣೆ ನಡೆಸಲಾಗುತ್ತಿದೆ.