ಬೆಂಗಳೂರು, ಆ 06 (DaijiworldNews/MS): ರಾಹುಲ್ ಕಾಲದಲ್ಲಿ ಡಿಕೆಶಿವಕುಮಾರ್ -ಸಿದ್ದರಾಮಯ್ಯ ಅಪ್ಪಿಕೊಂಡ ಜೋಡಿ, ರಾಹು ಕಾಲದಲ್ಲಿ ಅಧಿಕಾರಕ್ಕಾಗಿ ಬರೇ ಕಿತ್ತಾಟವಾಡುತ್ತಿದೆ ಎಂದು ಬಿಜೆಪಿ ಟ್ಟಿಟ್ಟರ್ ನಲ್ಲಿ ಟೀಕಿಸಿದೆ.
ಸಿದ್ದರಾಮೋತ್ಸವ ಹಾಗೂ ಕಾಂಗ್ರೆಸ್ ಹಮ್ಮಿಕೊಂಡಿರುವ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪಾದಯಾತ್ರೆ ಕಾರ್ಯಕ್ರಮದ ವಿಚಾರವಾಗಿ ಲೇವಡಿ ಮಾಡಿರುವ ಬಿಜೆಪಿ, "ರಾಹುಲ್ ಗಾಂಧಿ ಮುಂದೆ ಮಾಡಿದ ಎಲ್ಲಾ ನಾಟಕಗಳ ಮುಖವಾಡ ಕಳಚಿದೆ. ರಾಹುಲ್ ಗಾಂಧಿ ನಿರ್ದೇಶನದಂತೆ ಎಲ್ಲರೆದುರು ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡರು. ಆದರೆ, ಒಪ್ಪಿಕೊಂಡಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ " ಎಂದು ಹೇಳಿದೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಅಸಹನೆಗೆ ಬೆಂಕಿ ಬಿದ್ದಿದೆ, ನಿಜ ಬಣ್ಣ ಬಯಲಾಗುತ್ತಿದೆ. ಕಾಂಗ್ರೆಸ್ ಹಮ್ಮಿಕೊಂಡಿರುವ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪಾದಯಾತ್ರೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರನ್ನು ಹೊರಗಿಡಲಾಗುತ್ತಿದೆಯೇ? ಅಥವಾ ಪಕ್ಷದಿಂದಲೇ ನಡೆಯುವ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅತಿಥಿಯೇ? ಎಂದು ಪ್ರಶ್ನಿಸಿದೆ.