ಬೆಂಗಳೂರು, ಆ 06 (DaijiworldNews/DB): ರಾಜ್ಯಪಾಲರ ಹೆಸರು ಹೇಳಿ ಜನರಿಗೆ ವಂಚನೆ ಎಸಗುತ್ತಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸದರುಲ್ಲಾ ಖಾನ್ ಬಂಧಿತ ಆರೋಪಿ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಹೆಸರು ಹೇಳಿಕೊಂಡು ಈತ ಜನರನ್ನು ವಂಚಿಸುತ್ತಿದ್ದ. ನಾನು ರಾಜ್ಯಪಾಲರ ಅಧೀನ ಕಾರ್ಯದರ್ಶಿಯಾಗಿದ್ದು, ಎಲ್ಲಾ ವಿವಿಗಳಲ್ಲಿಯೂ ಸೆನೆಟ್ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಿಮ್ಮನ್ನು ವಿವಿ ಸಿಂಡಿಕೇಟ್ ಸದಸ್ಯನನ್ನಾಗಿ ಮಾಡುವುದಾಗಿ ಗಣ್ಯ ವ್ಯಕ್ತಿಗಳಿಗೆ ಕರೆ ಮಾಡಿ ವಂಚನೆ ಎಸಗುತ್ತಿದ್ದ. ಹಲವರು ಈ ಕರೆ ರಾಜ್ಯಪಾಲರ ಕಚೇರಿಯಿಂದಲೇ ಬಂದಿದೆ ಎಂದು ತಿಳಿದುಕೊಂಡು ನಂಬಿದ್ದರು. ಬಳಿಕ ಮೋಸ ಹೋಗಿರುವುದು ಗೊತ್ತಾಗಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸದರುಲ್ಲಾ ಖಾನ್ನ್ನು ಪೊಲೀಸರು ಬಂಧಿಸಿದ್ದಾರೆ.
ಸಚಿವರ ಹೆಸರು ಹೇಳಿ ವಂಚಿಸಿದ ಪ್ರಕರಣ ಬಯಲಾದ ಬೆನ್ನಲ್ಲೇ ರಾಜ್ಯಪಾಲರ ಹೆಸರಿನಲ್ಲಿಯು ವಂಚನೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.