ಬೆಂಗಳೂರು, ಆ 05 (DaijiworldNews/SM): ರಾಜ್ಯದಲ್ಲಿ ಕಾಂಗ್ರೆಸ್ ಗೂಂಡಾ ಪ್ರವೃತಿಯನ್ನು ತೋರುತ್ತಿದೆ. ಬಿಬಿಎಂಪಿ ಮೀಸಲಾತಿ ವಿಚಾರದಲ್ಲಿ ಆಕ್ಷೇಪಣೆ ಹಾಕುವುದಕ್ಕೆ ಸಮಯವಿದೆಯಾದರು ಕಾಂಗ್ರೆಸ್ ನವರು ಇಂದು ವಿಕಾಸಸೌಧದಲ್ಲಿ ನುಗ್ಗಿ ರೌಡಿಸಂ ಮಾಡಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿ ಕಾರಿದ್ದಾರೆ.
ಮೀಸಲಾತಿ 2015 ರ ಹೈಕೋರ್ಟ್ ಜಡ್ಜಮೆಂಟ್ ಪ್ರಕಾರ ಮಾಡಿದ್ದೇವೆ.ಇವರು ಏನು ಮಾಡಿದರು ನಮ್ಮ ಶಾಸಕರ ಕ್ಷೇತ್ರದಲ್ಲಿ ಎಂದು ಗೊತ್ತಿದೆ. ಅವರ ವರ್ತನೆ ಎಷ್ಟರಮಟ್ಟಿಗೆ ಸರಿ ಇದೆ. ಜನ ಇದನ್ನು ಗಮನಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.