ಯಾದಗಿರಿ, ಆ 05 (DaijiworldNews/HR): ಶ್ರಾವಣ ಮಾಸ ಹಿನ್ನಲೆ ದೇವಸ್ಥಾನದ ಮುಂದೆ ಭಜನೆ ಮಾಡುತ್ತಿದ್ದ ಕಲ್ಲಿನ ಕಂಬ ಬಿದ್ದು ವ್ಯಜ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಉಳ್ಳೀಸುಗೂರು ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನುಉಳ್ಳೇಸುಗೂರು ಗ್ರಾಮದಲ್ಲಿ ದೇವಪ್ಪ(40) ಎಂದು ಗುರುತಿಸಲಾಗಿದೆ.
ದೇವಪ್ಪ ಅವರು ಅಂಜನೇಯ ದೇಗುಲದ ಮುಂದೆ ಭಜನೆ ಮಾಡುತ್ತಿದ್ದಾಗ ಘಟನೆ ನಡೆದಿದ್ದು, ಈ ಬಗ್ಗೆ ವಡಗೇರ ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಿಸಲಾಗಿದೆ.