ಮುಂಬೈ, ಆ 05 (DaijiworldNews/DB): ಉಗ್ರ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪದ ಮೇರೆಗೆ ದಾವೂದ್ ಇಬ್ರಾಹಿಂನ ಸಂಬಂಧಿ ಸಲೀಂ ಖುರೇಷಿ ಅಲಿಯಾಸ್ `ಸಲೀಂ ಫ್ರೂಟ್' ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗುರುವಾರ ಬಂಧಿಸಿದೆ.
ಈತ ದಾವೂದ್ನ ಭಾವ ಎನ್ನಲಾಗಿದೆ. ಅಲ್ಲದೆ ಛೋಟಾ ಶಕೀಲ್ನ ಆಪ್ತ ಸಹಾಯಕನಾಗಿಯೂ ಗುರುತಿಸಿಕೊಂಡಿದ್ದ ಎಂದು ತಿಳಿದು ಬಂದಿದೆ. 'ಡಿ ಕಂಪನಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಈತ ಹಣ ಸಂಗ್ರಹಣೆ ಮಾಡುತ್ತಿದ್ದ. ಅಲ್ಲದೆ, ಚೋಟಾ ಶಕೀಲ್ ಹೆಸರಲ್ಲಿ ಆಸ್ತಿ ವ್ಯಾಜ್ಯಗಳು ಮತ್ತು ವಿವಾದ ಇತ್ಯರ್ಥಗಳಿಂದಂದಲೂ ಈತ ಹಣ ಸುಲಿಗೆ ಮಾಡುತ್ತಿದ್ದ.
ದಾವೂದ್ ಮತ್ತಾತನ ಸಹಚರರು ಎಸಗುತ್ತಿದ್ದ ಕಳ್ಳಸಾಗಣೆ, ಮಾದಕ ದ್ರವ್ಯ, ಭಯೋತ್ಪಾದನೆ, ಅಕ್ರಮ ಹಣ ವರ್ಗಾವಣೆ, ನಕಲಿ ಕರೆನ್ಸಿ ಚಲಾವಣೆ ಮುಂತಾದ ಕೃತ್ಯಗಳಲ್ಲಿ ಈತ ಮುಂಚೂಣಿಯಲ್ಲಿದ್ದ. ಅಲ್ಲದೆ ಭಯೋತ್ಪಾದನೆಗೆ ಹಣ ಸಂಗ್ರಹ ಮಾಡುತ್ತಿದ್ದ. ಲಷ್ಕರ್-ಎ-ತಯಬಾ, ಜೈಶ್ ಎ ಮೊಹಮ್ಮದ್, ಅಲ್ ಕೈದಾ ಸೇರಿದಂತೆ ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಈತನಿಗೆ ನಂಟಿತ್ತು. ಈ ಎಲ್ಲಾ ಆರೋಪಗಳ ಸಂಬಂಧ ಈತನ ವಿರುದ್ದ ಪ್ರಕರಣ ದಾಖಲಾಗಿದ್ದು, ಇದೀಗ ಎನ್ಐಎಯಿಂದ ಆತನ ಬಂಧನವಾಗಿದೆ.