ಬೆಂಗಳೂರು, ಆ 05 (DaijiworldNews/HR): ಮಂಕಿ ಫಾಕ್ಸ್ ಪತ್ತೆಹಚ್ಚಲು ಅಭಿವೃದ್ಧಿಪಡಿಸಿರುವ ಆರ್ಟಿಪಿಸಿಆರ್ ಕಿಟ್ ಸೇರಿದಂತೆ ಒಂಬತ್ತು ಉತ್ಪನ್ನಗಳನ್ನು ಸಚಿವ ಡಾ.ಅಶ್ವತ್ಥನಾರಾಯಣ ಬಿಡುಗಡೆ ಮಾಡಿದ್ದಾರೆ.
ನಿಯೋಡೆಎಕ್ಸ್ ಬಯೋಟೆಕ್ ಲ್ಯಾಬ್ಸ್ನ ಡಾ.ಪ್ರಭಾಕರ ಕುಲಕರ್ಣಿ ಅಭಿವೃದ್ಧಿಪಡಿಸಿರುವ ಈ ಕಿಟ್ನಿಂದ ಸುಲಭವಾಗಿ ಮಂಕಿ ಫಾಕ್ಸ್ ವೈರಸ್ ಅನ್ನು ಪತ್ತೆಹಚ್ಚಬಹುದಾಗಿದೆ.
ಇನ್ನು ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚಲು ನೆರವಾಗುವ ಅನ್ಕೊ ಡಿಎಕ್ಸ್, ನ್ಯೂ ಹಾರ್ಟ್ ಮತ್ತು ಪ್ಯೂರ್ ವಾಟರ್ ಹೀಗೆ ಒಂಬತ್ತು ಉತ್ಪನ್ನಗಳನ್ನು ಕೂಡ ಇದೇ ವೇಳೆ ಬಿಡುಗಡೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾನವ ತಳಿಕೇಂದ್ರದ ಸಂಸ್ಥಾಪಕ ನಿರ್ದೇಶಕ ಪ್ರೊ.ಎಚ್.ಶರತ್ ಚಂದ್ರ, ನಿರ್ದೇಶಕರಾದ ಪ್ರೊ ಜಯರಾಮ ಎಸ್ ಕಡಂದಲೆ, ಸಹಾಯಕ ನಿರ್ದೇಶಕಿ ಡಾ.ಮೀನಾಕ್ಷಿ ಭಟ್ ಉಪಸ್ಥಿತರಿದ್ದರು.