ಬೆಂಗಳೂರು, ಆ 05 (DaijiworldNews/HR): ಬೆಂಗಳೂರಿನ ಸಂಪಂಗಿರಾಮನಗರದಲ್ಲಿ 4 ವರ್ಷದ ಮಗಳನ್ನು ತಾಯಿ ನಾಲ್ಕನೇ ಮಹಡಿಯಿಂದ ಎಸೆದು, ತಾನು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮಗುವನ್ನು ಜೀತಿ ಎಂದು ಗುರುತಿಸಲಾಗಿದ್ದು, ತಾಯಿ ತನ್ನ ಮಗಳನ್ನು ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇನ್ನು ತಾಯಿ ಸುಷ್ಮಾ ಇತ್ತೀಚೆಗಷ್ಟೇ ಗಂಡನನ್ನು ಕಳೆದುಕೊಂಡಿದ್ದು, ಅನಾರೋಗ್ಯದಿಂದ ಪತಿ ತೀರಿಕೊಂಡಿದ್ದು, ಇತ್ತ ಮಗಳು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾಳೆ ಎಂದು ಈ ಕೃತ್ಯವೆಸಗಿದ್ದಾಳೆ.
ಮಗುವನ್ನು ಮೇಲಿಂದ ಬಿಸಾಕಿದ ಬಳಿಕ ಸುಷ್ಮಾ ತಾನೂ ಆತ್ಮಹತ್ಯೆ ಮಡಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಅಕ್ಕಪಕ್ಕದ ಮನೆಯವರು ಬಂದು ಆಕೆಯನು ರಕ್ಷಣೆ ಮಾಡಿರುವ ದೃಡ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.