ಭೋಪಾಲ್, ಆ 05 (DaijiworldNews/MS): ಪಂಚಾಯತ್ ನಲ್ಲಿ ಚುನಾಯಿತರಾದ ಮಹಿಳಾ ಸದಸ್ಯರ ಬದಲಾಗಿ , ಅವರ ಪತಿ, ಸೋದರ ಮಾವ, ತಂದೆ ಹೀಗೆ ಪಂಚಾಯತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಜೈಸಿನಗರದಲ್ಲಿ ಕಂಡುಬಂದಿದೆ.
ಚುನಾಯಿತ ಮಹಿಳಾ ಸದಸ್ಯರ ಸ್ಥಾನದಲ್ಲಿ ಏಳು ಮಂದಿ ಅವರ ಸಂಬಂಧಿಗಳು ಸದಸ್ಯರು, ಸರಪಂಚ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ .ಈ ಸಮಾರಂಭದ ತುಣುಕುಗಳು ಈಗ ವೈರಲ್ ಆಗಿವೆ.
ವೀಡಿಯೋದಲ್ಲಿ, ತಿಲಕ ಧರಿಸಿರುವ ಪುರುಷರು ಪ್ರಮಾಣ ವಚನ ಸ್ವೀಕರಿಸುವುದನ್ನು, ಎಲ್ಲರಿ ಸಮಾನತೆ ಮತ್ತು ಹಕ್ಕುಗಳನ್ನು ಒದಗಿಸುವುದಾಗಿಯೂ ಪ್ರತಿಜ್ಞೆ ಸ್ವೀಕರಿಸುವುದನ್ನು ಕಾಣಬಹುದು.
ಜೈಸಿನಗರದಲ್ಲಿ ಪಂಚಾಯತ್ ಸರಪಂಚ್ ಸೇರಿದಂತೆ ಒಟ್ಟು 21 ಸದಸ್ಯರು ಆಯ್ಕೆಯಾಗಿದ್ದು, ಈ ಪೈಕಿ 10 ಮಹಿಳೆಯರು ಪಂಚಾಯತ್ ಪ್ರಮಾಣ ವಚನದಲ್ಲಿ 10 ಮಹಿಳೆಯರ ಪೈಕಿ ಮೂವರು ಮಾತ್ರ ಹಾಜರಿದ್ದರು. ಉಳಿದವರ ಕುಟುಂಬದ ಪುರುಷ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.