ಮಂಡ್ಯ, ಆ 05 (DaijiworldNews/MS): ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ, ಮಹಿಳೆಯರ ಅರ್ಧ ಶವ ಪತ್ತೆಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಸರಣಿ ಹಂತತಕರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳೆಯಾಗಿದ್ದು, ಗುರುತು ಬಹಿರಂಗಪಡಿಸಿಲ್ಲ.
ಆರೋಪಿಗಳು ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿಯ ಕೋಡಿಹಳ್ಳಿ ಕಾಲನಿ ನಿವಾಸಿ ಹಾಗೂ ಪಾಂಡವಪುರ ತಾಲೂಕಿನ ಹರವು ಗ್ರಾಮದ ಮಹಿಳೆಯಾಗಿದ್ದಾಳೆ.
ಇವರಿಬ್ಬರು ಮೂರು ಹತ್ಯೆ ಮಾಡಿದ್ದು ಮಾಡಿದ್ದು, ಮತ್ತೆ 5 ಕೊಲೆಗಳಿಗೆ ಸಂಚು ರೂಪಿಸಿದ್ದರು. ಹತ್ಯೆ ಮಾಡಿದ ಸುಳಿವು ಸಿಗಬಾರದೆಂಬ ಕಾರಣಕ್ಕೆ ಹೊಟ್ಟೆಯ ಕೆಳಭಾಗದ ಅರ್ಧ ಶವವನ್ನು ಮಾತ್ರ ನಾಲೆಗೆ ಎಸೆಯುತ್ತಿದ್ದರು.
ಹಣ , ಒಡವೆ ಕಾರಣಕ್ಕೆ ಕೊಲೆಗಳನ್ನು ಮಾಡಲಾಗಿದೆ. ಕೊಲೆಯಾದ ಇಬ್ಬರು ಮಹಿಳೆಯರು ಆರೋಪಿಗಳಿಗೆ ಹಿಂದೆಯೇ ಪರಿಚಯವಿದ್ದು, ಗಾರ್ಮೆಂಟ್ಸ್ ಮತ್ತು ನರ್ಸಿಂಗ್ ಹೋಂ ಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಬ್ಬರನ್ನೂ ಮೇಟಗಳ್ಳಿಯ ಬಾಡಿಗೆ ಮನೆಗೆ ಕರೆಸಿಕೊಂಡು ಕೊಲೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಪಾರ್ವತಿ, ಚಾಮರಾಜನಗರದ ಗೀತಾ ಅಲಿಯಾಸ್ ಪುಟ್ಟಿ ಹತ್ಯೆಯಾದವರು. , ಪಾರ್ವತಿಯನ್ನು ಮೇ 30ರಂದು, ಗೀತಾಳನ್ನು ಜೂ. 3ರಂದು ಕೊಲೆ ಮಾಡಲಾಗಿತ್ತು. ಶವಗಳನ್ನು ಬೈಕ್ಗಳಲ್ಲಿ ಸಾಗಿಸುವುದು ಕಷ್ಟವೆಂಬ ಕಾರಣಕ್ಕೆ ಹಾಗೂ ಹತ್ಯೆ ಸುಳುವು ಸಿಗಬಾರದು ಎಂದು ದೇಹಗಳನ್ನು ಅರ್ಧಕ್ಕೆ ತುಂಡರಿಸಿ ಬೇರೆ ಬೇರೆ ಕಡೆ ಎಸೆಯುತ್ತಿದ್ದರು ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಮಧುಕ ಪವಾರ್ ಮಾಹಿತಿ ನೀಡಿದ್ದಾರೆ.