ಬೆಳಗಾವಿ, ಆ 04 (DaijiworldNews/DB): ಕಾಂಗ್ರೆಸ್ ರಾಜ್ಯದ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಆ ಪಕ್ಷ ಶೀಘ್ರ ವಸ್ತು ಸಂಗ್ರಹಾಲಯವಾಗಿ ಬದಲಾಗಲಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಲೇವಡಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ತೋರಿಕೆಗೆ ಮಾತ್ರ ಒಗ್ಗಟ್ಟು ಪ್ರದರ್ಶನ ನಡೆಯುತ್ತಿದೆ. ಆದರೆ ಅಧಿಕಾರದ ದುರಾಸೆ ಆ ಪಕ್ಷದ ಪ್ರತಿ ನಾಯಕನಿಗೂ ಇದೆ. ಹೀಗಾಗಿಯೇ ಸದ್ಯ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯಕ್ಕೆ ಕಾಂಗ್ರೆಸ್ನ ರಾಜಕಾರಣ ಅಪ್ರಸ್ತುತವಾಗಿದೆ. ಹೀಗಾಗಿ ಆ ಪಕ್ಷದ ನಾಯಕರು ರಾಜಕೀಯದಿಂದ ನಿವೃತ್ತಿ ಹೊಂದಿ ಇತರರನ್ನು ಆಶೀರ್ವದಿಸಿದರೆ ಒಳಿತು ಎಂದರು.