ನವದೆಹಲಿ, ಆ 04 (DaijiworldNews/DB): ಬಾಲಿವುಡ್ ನಟ, ರಂಗಭೂಮಿ ಕಲಾವಿದ ಮಿಥಿಲೇಶ್ ಚತುರ್ವೇದಿ ಅವರು ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.
ಲಕ್ನೋದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೃತಿಕ್ ರೋಶನ್ ಅವರ 'ಕೋಯಿ ಮಿಲ್ ಗಯಾ', ಸನ್ನಿ ಡಿಯೋಲ್ ಜೊತೆಗೆ 'ಗದರ್ ಏಕ್ ಪ್ರೇಮ್ ಕಥಾ', 'ಸತ್ಯ', 'ಬಂಟಿ ಔರ್ ಬಬ್ಲಿ', 'ಕ್ರಿಶ್' ಸಿನಿಮಾಗಳಲ್ಲಿ ನಟಿಸಿದ್ದ ಮಿಥಿಲೇಶ್ ಚತುರ್ವೇದಿ ಅವರು ಕಳೆದ ಮೂರು ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. ಬಂಚಾಡ ಅವರ ಕೊನೆಯ ಸಿನೆಮಾ.
ಇದಲ್ಲದೆ 'ಸ್ಕ್ಯಾಮ್1992'ವೆಬ್ ಸಿರೀಸ್ನಲ್ಲಿ ನಟಿಸಿದ್ದರು. ವೆಬ್ ಸಿರೀಸ್ನಲ್ಲಿ ಆಸಕ್ತಿ ಹೊಂದಿದ್ದ ಅವರ ಇನ್ನೊಂದು ಸೀರೀಸ್ನಲ್ಲಿ ನಟಿಸುವ ಬಗ್ಗೆಯೂ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಮಿಥಿಲೇಶ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.