ಹುಬ್ಬಳ್ಳಿ, ಆ 04 (DaijiworldNews/DB): ಹುಬ್ಬಳ್ಳಿಯಲ್ಲಿರುವ ಖಾದಿ ಧ್ವಜ ತಯಾರಿಕಾ ಘಟಕಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ನೀಡಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಪ್ರತಿಭಟನಾ ನಿರತ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿದರು.
ಬಳಿಕ ಮಾತನಾಡಿದ ಅವರು, ಖಾದಿ ಮತ್ತು ಚರಕ ಮಹಾತ್ಮಗಾಂಧಿ ಹಾಗೂ ಭಾರತವನ್ನು ಪ್ರತಿನಿಧಿಸುತ್ತವೆ. ಆದರೆ ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳನ್ನು ಬಿಜೆಪಿ ಸರ್ಕಾರ ಅಧಃಪತನಕ್ಕೆ ತಳ್ಳುತ್ತಿದೆ ಎಂದರು ಆಪಾದಿಸಿದರು.
ಕೇಂದ್ರದ ಬಿಜಿಪಿ ಸರ್ಕಾರವು ತನಗೆ ಬೆಂಬಲವಾಗಿರುವ ಜನರಿಂದ ಮಾತ್ರ ಉತ್ಪಾದನೆಯನ್ನು ಬಯಸುತ್ತಿದೆ. ಖಾದಿ ಧ್ವಜ ನೇಕಾರರ ಹಣವನ್ನು ಬಿಜೆಪಿಯವರ ನಿಷ್ಠ ಜನರ ಜೇಬಿಗೆ ಹಾಕುವುದೇ ಅವರ ಯೋಚನೆಯಾಗಿದೆ. ಧ್ವಜ ನಿಯಮಗಳನ್ನು ಬದಲಾಯಿಸಿರುವ ಅವರ ಉದ್ದೇಶವೂ ಇದೇ ಆಗಿದೆ ಎಂದರು.