ಚಿತ್ರದುರ್ಗ, ಆ 03 (DaijiworldNews/DB): ಕರ್ನಾಟಕ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಚಿತ್ರದುರ್ಗದ ಶ್ರೀ ಮುರುಘಾ ಮಠಕ್ಕೆ ಭೇಟಿ ನೀಡಿದ್ದ ವೇಳೆ ಮಠದಲ್ಲಿ ನೀಡಿದ ದೇವರ ತೀರ್ಥವನ್ನು ವಿಚಿತ್ರವಾಗಿ ಸೇವಿಸಿರುವುದಕ್ಕೆ ಬಿಜೆಪಿ ವ್ಯಂಗ್ಯವಾಡಿದೆ.
ಮುರುಘಾ ಮಠಕ್ಕೆ ಕಾಂಗ್ರೆಸ್ ನಾಯಕರೊಂದಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಸ್ವಾಮೀಜಿಗಳೊಂದಿಗೆ ಸಂವಾದ ನಡೆಸಿ ಬಳಿಕ ದೇವರ ಪ್ರಸಾದ ಸ್ವೀಕರಿಸಿದರು. ಈ ವೇಳೆ ಅರ್ಚಕರು ನೀಡಿದ ಪ್ರಸಾದವನ್ನು ವಿಚಿತ್ರವಾಗಿ ತಿಂದಿದ್ದಾರೆ . ಈ ವೀಡಿಯೊ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ತೀರ್ಥದಲ್ಲಿ ಕಡಲೆಕಾಯಿ ಹಾಕಿಕೊಟ್ಟಿದ್ದರಾ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ದೀಕ್ಷೆ ಪಡೆದುಕೊಂಡ ಬಳಿಕ ನಂಬಿಕೆಯನ್ನು ಪಾಲಿಸಬೇಕು. ರಾಜಕೀಯ ಲಾಭಕ್ಕಾಗಿ ನಂಬಿಕೆಗಳನ್ನು ಲೇವಡಿ ಮಾಡಬಾರದು ಎಂದು ರಾಹುಲ್ ಕಿವಿ ಹಿಂಡಿದ್ದಾರೆ.
ಇನ್ನು ರಾಹುಲ್ ಗಾಂಧಿಯವರ ಈ ವೀಡಿಯೊ ಬಿಜೆಪಿ ಕರ್ನಾಟಕ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ’ಎಲೆಕ್ಷನ್ ಹಿಂದು’ ರಾಹುಲ್ ಗಾಂಧಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದೆ.