ನವದೆಹಲಿ, ಆ 03 (DaijiworldNews/DB): ಟಿಬೆಟ್ ಮತ್ತು ತೈವಾನ್ನ್ನು ಚೀನಾದ ಭಾಗವೆಂದು ಭಾರತೀಯರು ಒಪ್ಪಿಕೊಳ್ಳಲು ಜವಾಹರ ಲಾಲ್ ನೆಹರೂ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನವೇ ಕಾರಣ ಎಂದು ಕೇಂದ್ರದ ಮಾಜಿ ಸಚಿವ ಮತ್ತುಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಅವರು, ಉಭಯ ದೇಶಗಳು ಪರಸ್ಪರ ಒಪ್ಪಿದ ಎಲ್ಎಸಿಯನ್ನು ಪ್ರಸ್ತುತ ಚೀನಾ ಗೌರವಿಸುತ್ತಿಲ್ಲ. ಅಲ್ಲದೆ ಲಡಾಖ್ನ ಕೆಲವು ಭಾಗಗಳನ್ನು ಕೂಡಾ ಅದು ವಶಪಡಿಸಿಕೊಂಡಿದೆ. ಆದರೆ ಮೋದಿ ಮಾತ್ರ ಕೋಯಿ ಆಯಾ ನಹೀನ್ ಎಂದು ಹೇಳಿಕೊಂಡು ಸುಮ್ಮನಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಹರೂ ಮತ್ತು ವಾಜಪೇಯಿ ಅವರ ಮೂರ್ಖತನದಿಂದಾಗಿ ಟಿಬೆಟ್ ಮತ್ತು ತೈವಾನ್ ಚೀನಾದ ಭಾಗವೆಂದು ನಾವು ಒಪ್ಪಿಕೊಳ್ಳಬೇಕಾಯಿತು. ಆದರೆ ನಾವು ಈ ಬಗ್ಗೆ ಇನ್ನೂ ನಿರ್ಧರಿಸಬಹುದು. ಏಕೆಂದರೆ ಮುಂದೆಯೂ ಚುನಾವಣೆಗಳಿವೆ ಎಂಬುದನ್ನು ಚೀನಾ ಅರಿತುಕೊಳ್ಳಬೇಕು ಎಂದವರು ಇದೇ ವೇಳೆ ಎಚ್ಚರಿಸಿದ್ದಾರೆ.