ಬೆಂಗಳೂರು, ಆ 03 (DaijiworldNews/DB): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನೀವು ಪ್ರಧಾನಿಯಾಗುತ್ತೀರಿ ಎಂದು ಹಾವೇರಿ ಹೊಸಮುತ್ತು ಸ್ವಾಮಿಗಳು ಬುಧವಾರ ಹಾರೈಸಿದ್ದಾರೆ.
ಸಿದ್ದರಾಮಯ್ಯನವರ ಹುಟ್ಟುಹಬ್ಬದ ಅಮೃತ ಮಹೋತ್ಸವಕ್ಕೆ ರಾಜ್ಯಕ್ಕೆ ಆಗಮಿಸಿದ ರಾಹುಲ್ ಗಾಂಧಿ ಚಿತ್ರದುರ್ಗದ ಶ್ರೀ ಮುರುಘಾ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹೊಸಮುತ್ತು ಸ್ವಾಮಿಗಳು ಮಾತನಾಡುತ್ತಾ ರಾಹುಲ್ ಗಾಂಧಿ ಅವರೇ ನೀವು ಪ್ರಧಾನಿಯಾಗುತ್ತೀರಿ ಎಂದು ಹಾರೈಸಿದರು. ಇದೇ ವೇಳೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು, ನಮ್ಮ ಮಠಕ್ಕೆ ಯಾರು ಭೇಟಿ ನೀಡುತ್ತಾರೋ ಅವರು ಧನ್ಯರು' ಎಂದರು.
ಮುರುಘಾ ಶ್ರೀಗಳೊಂದಿಗೆ ಮಾತನಾಡುವ ವೇಳೆ ರಾಹುಲ್ ಗಾಂಧಿಯವರು ಲಿಂಗಧಾರಣೆ ಕುರಿತು ಮಾಹಿತಿ ಕೇಳಿದರು. ಈ ವೇಳೆ ಶ್ರೀಗಳು, ರಾಹುಲ್ ಗಾಂಧಿಯವರಿಗೆ ಲಿಂಗ ಧಾರಣೆ ಮಾಡಿ ವಿಭೂತಿ ಹಚ್ಚಿ ಆಶೀರ್ವದಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಹುಲ್ ಜೊತೆಗಿದ್ದರು.