ಮಂಬೈ, ಆ 02 (DaijiworldNews/HR): ಶಿವಸೇನೆ ಸಂಸದ ಸಂಜಯ್ ರಾವತ್ ಬಂಧನಕ್ಕೊಳಗಾದ ಎರಡು ದಿನಗಳ ಬಳಿಕ ಜಾರಿ ನಿರ್ದೇಶನಾಲಯ ಅಧಿಕಾರಿಗೆ ಸಂಜಯ್ ಅವರಿಗೆ ಸಂಬಂಧಿಸಿದ ಎರಡು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಸಂಜಯ್ ರಾವುತ್ ಅವರ ನಿವಾಸದಲ್ಲಿ ಒಂಬತ್ತು ಗಂಟೆಗಳ ಕಾಲ ಶೋಧ ನಡೆಸಿದ ನಂತರ ಮುಂಬೈನ 'ಚಾಲ್' ಮರು ಅಭಿವೃದ್ಧಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಭಾನುವಾರ ಮಧ್ಯರಾತ್ರಿ ಅವರನ್ನು ಬಂಧಿಸಿದೆ.
ಇನ್ನು ಈ ತನಿಖೆಯ ಭಾಗವಾಗಿ ಏಪ್ರಿಲ್ನಲ್ಲಿ ಇಡಿ ಅಧಿಕಾರಿಗಳು ಸಂಜಯ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರಿಗೆ ಸೇರಿದ 11.15 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.