ಬೆಂಗಳೂರು, ಆ 02 (DaijiworldNews/HR): ಉದ್ಯೋಗದ ಆಮಿಷ ಒಡ್ಡಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್ ಅನ್ನು ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವಿಶಾಲ್ ಕುಮಾರ್, ಭೀಮಾಂಶು ಠಾಕೂರ್, ಸಾಗರ್, ಮಹಾಬಲಿಸಿಂಗ್, ಸುಬರ್ಜಿತ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಗ್ಯಾಂಗ್ Loconto ಎಂಬ ಆಯಪ್ ಒಂದರ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗದ ಆಸೆ ತೋರಿಸಿ ನೇಮಕ ಮಾಡಿಕೊಳ್ಳುತ್ತಿದ್ದು, ಬಳಿಕ ಇಂಟರ್ನ್ಯಾಷನಲ್ ಕೊರಿಯರ್ ಸರ್ವೀಸ್ ಹೆಸರಿನಲ್ಲಿ ಈ ಉದ್ಯೋಗಿಗಳ ಮೂಲಕ ಅಗತ್ಯ ಇರುವವರಿಗೆ ಡ್ರಗ್ಸ್ ಕಳುಹಿಸುತ್ತಿದ್ದರು ಎನ್ನಲಾಗಿದೆ.
ಇನ್ನು ಆರೋಪಿಗಳಿಂದ ಎರಡು ಕೋಟಿ ರೂಪಾಯಿ ಮೌಲ್ಯದ ವಿವಿಧ ರೀತಿಯ ಸಿಂಥೆಟಿಕ್ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.