ಮಲಪ್ಪುರಂ, ಆ 02(DaijiworldNews/MS): ಕೇರಳದಲ್ಲಿ ಮಂಕಿಪಾಕ್ಸ್ ತರಹದ ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಒಂದು ದಿನದ ಯುಎಇಗೆ ಹಿಂದಿರುಗಿದ ಮತ್ತೊಬ್ಬ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ವೈರಸ್ ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಐದನೇ ಪ್ರಕರಣ ವರದಿಯಾದಂತಾಗಿದೆ.
30 ವರ್ಷ ವಯಸ್ಸಿನ ಸೋಂಕಿತ ವ್ಯಕ್ತಿ ಮಲಪ್ಪುರಂನಲ್ಲಿ ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರು ಜುಲೈ 27ರಂದು ಯುಎಇಯಿಂದ ಕೋಜಿಕ್ಕೋಡ್ ವಿಮಾನ ನಿಲ್ದಾಣದ ಮೂಲಕ ಬಂದಿದ್ದರು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ದೇಶದಾದ್ಯಂತ ಈವರೆಗೆ ಒಟ್ಟು 7 ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ.