ಕೋಲ್ಕತ್ತಾ, ಆ 01(DaijiworldNews/MS): ಪಶ್ಚಿಮ ಬಂಗಾಳದಲ್ಲಿ ಏಳು ಹೊಸ ಜಿಲ್ಲೆಗಳಿಗೆ ಸಂಪುಟವು ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ ಎಂದು ಕೋಲ್ಕತ್ತಾದಲ್ಲಿ ಮುಖ್ಯಮಂತ್ರಿ ಬ್ಯಾನರ್ಜಿ ಸೋಮವಾರ ಹೇಳಿದ್ದಾರೆ.
ಈ ಹಿಂದೆ ಬಂಗಾಳದಲ್ಲಿ 23 ಜಿಲ್ಲೆಗಳಿದ್ದವು. 7 ಹೊಸ ಜಿಲ್ಲೆಗಳು ಸೇರ್ಪಡೆಗೊಂಡರೆ 30 ಜಿಲ್ಲೆಗಳಾಗಳಿದೆ. ಬರ್ಹಾಂಪೋರ್, ಕಂಡಿ, ಸುಂದರ್ಬನ್, ಬಶೀರ್ಹತ್, ಇಚಮತಿ, ರಾಣಾಘಾಟ್ ಮತ್ತು ಬಿಷ್ಣುಪುರ್ ಇವು ಹೊಸ ಜಿಲ್ಲೆಗಳಾಗಿ ರೂಪು ತಳೆಯಲಿದೆ.
ಸುಗಮ ಆಡಳಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ ನಾಲ್ಕೈದು ಹೊಸ ಮುಖಗಳನ್ನು ಶೀಘ್ರದಲ್ಲೇ ಸಂಪುಟಕ್ಕೆ ಪರಿಚಯಿಸಲಾಗುವುದು ಮತ್ತು ಆಗಸ್ಟ್ 3 ಬುಧವಾರ ಸಂಪುಟ ಪುನರ್ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.