ಮುಂಬೈ, ಆ 01(DaijiworldNews/MS): ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಪತನವಾಗುವುದು ಖಚಿತ ಎಂದು ಮಾಜಿ ಸಚಿವ ಆದಿತ್ಯ ಠಾಕ್ರೆ ಸೋಮವಾರ ಹೇಳಿದ್ದಾರೆ.
ತಮ್ಮ ರಾಜಕೀಯ ಪ್ರವಾಸದ ವೇಳೆ ಶಿವಸೇನೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿಂಧೆ ಸರ್ಕಾರದ ಗಮನವು "ಕೊಳಕು ರಾಜಕೀಯ" ದ ಮೇಲೆ ಕೇಂದ್ರೀಕೃತವಾಗಿದೆಯೇ ಹೊರತು ಜನರ ಕಲ್ಯಾಣವಲ್ಲ ಎಂದು ಆರೋಪಿದ್ದಾರೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ದೇವೇಂದ್ರ ಫಡ್ನವಿಸ್ ಉಪಮುಖ್ಯಮಂತ್ರಿಯಾಗಿರುವ ಶಿಂಧೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಆದಿತ್ಯ ಠಾಕ್ರೆ, ಈ ಸಂಪೂರ್ಣ ರಾಜಕೀಯ ನಾಟಕ ಒಂದೂವರೆ ತಿಂಗಳದ್ದು. ಸರ್ಕಾರ ಪತನವಾಗುವುದು ಖಚಿತ. ಮಹಾರಾಷ್ಟ್ರ ಎಂದಿಗೂ ವಿಶ್ವಾಸಘಾತುಕತನವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ
ಕೊಳಕು ರಾಜಕೀಯದಲ್ಲಿ ಕಾಲಹರಣ ಮಾಡುತ್ತಿರುವ ಶಿಂಧೆ ಸರ್ಕಾರ , ರಾಜ್ಯದಲ್ಲಿ ಎಡೆಬಿಡದೆ ಮಳೆ, ಪ್ರವಾಹ ಉಂಟಾಗಿದ್ದರೂ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದ್ದಾರೆ.