ವಾರಣಾಸಿ, ಆ 01(DaijiworldNews/MS): ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಶೃಂಗಾರ್ ಗೌರಿ ಪ್ರಕರಣಗಳಲ್ಲಿ ಮುಸ್ಲಿಮ್ ಬಣದ ಪರವಾಗಿ ವಾದಿಸುತ್ತಿರುವ ವಕೀಲರ ಪೈಕಿ ಓರ್ವರಾಗಿರುವ ಅಭಯ್ನಾಥ್ ಯಾದವ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
62 ವರ್ಷದ ಅಭಯ್ನಾಥ್ ಭಾನುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದು ಇಂದು ಬೆಳಗ್ಗೆ ಅಂತ್ಯ ಸಂಸ್ಕಾರ ನಡೆಸುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಜುಲೈ 31 ರ ಭಾನುವಾರ ತಡರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು ಕುಟುಂಬಸ್ಥರು ಅವರನ್ನು ಮಕ್ಬೂಲ್ ಆಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರು ಚಿಕಿತ್ಸೆ ನೀಡುವಾಗ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ವಾರಣಾಸಿಯ ವಿವಿಧ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಮುಸ್ಲಿಂ ಪರ ಎಲ್ಲಾ ಪ್ರಕರಣಗಳಲ್ಲಿ ಅಭಯ್ ನಾಥ್ ಯಾದವ್ ಮುಖ್ಯ ವಕೀಲರಾಗಿ ಇಡೀ ಪ್ರಕರಣವನ್ನು ನೋಡಿಕೊಳ್ಳುತ್ತಿದ್ದರು.
ನ್ಯಾಯಾಲಯದಲ್ಲಿ ಮುಸ್ಲಿಂ ಪರವಾಗಿ ಏಕಾಂಗಿಯಾಗಿ ವಾದ ಮಂಡಿಸುತ್ತಿದ್ದರು. ವೈಯಕ್ತಿಕ ಜೀವನದಲ್ಲಿ ಅಭಯನಾಥ್ ತುಂಬಾ ಸ್ನೇಹಪರ ವ್ಯಕ್ತಿ. ವಿವಿಧ ಪ್ರಕರಣಗಳಲ್ಲಿ ಅವರ ವಾದಗಳಿಂದ ಮಾತ್ರವಲ್ಲದೆ ವಕೀಲರ ಸಮಾಜದಲ್ಲಿಯೂ ಅವರು ವಕೀಲರ ಸಮಾಜದಲ್ಲಿ ಹೆಚ್ಚು ಗೌರವಾನ್ವಿತರಾಗಿದ್ದರು.